3 ಘಂಟೆ 30 ದಿನ 30 ಸೆಕೆಂಡ್ (ಆಂಗ್ಲ: 3 30 30 ) 2018ರ ಕನ್ನಡ ಬಾಷೆಯ ಪ್ರೇಮ ಚಿತ್ರ. ಈ ಚಿತ್ರವನ್ನು ಜಿ. ಕೆ. ಮಧುಸೂದನ್ ನಿರ್ದೇಶಿಸಿದ್ದಾರೆ. ಚಂದ್ರಶೇಖರ ಆರ್ ಪದ್ಮಶಾಲಿ ಮತ್ತು ಇತರೆ ಸಹ ನಿರ್ಮಾಪಕರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಟ ಮತ್ತು ನಟಿಯ ನಡುವೆ ನಡೆಯುವ ರಿಯಾಲಿಟಿ ಶೋ ಈ ಚಿತ್ರದ ಕಥೆ. ಈ ಚಿತ್ರದಲ್ಲಿ ಹೊಸ ನಟರಾದ ಅರುಣ್ ಗೌಡ ಮತ್ತು ಕಾವ್ಯ ಶೆಟ್ಟಿ ನಟಿಸಿದರೆ, ದೇವರಾಜ್, ಸುಧಾರಾಣಿ, ಚಂದ್ರಶೇಖರ್, ರಮೇಶ್ ಭಟ್, ಅನಂತ್ ವೇಲು, ಟಿ. ಎಸ್. ನಾಗಾಭರಣ ಮತ್ತು ಗುರುರಾಜ್ ಹೊಸಕೋಟೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. == ಪಾತ್ರವರ್ಗ == ಅರುಣ್ ಗೌಡ ಕಾವ್ಯ ಶೆಟ್ಟಿ ದೇವರಾಜ್ ಸುಧಾ ರಾಣಿ ಚಂದ್ರಶೇಖರ ರಮೇಶ್ ಭಟ್ ಅನಂತ ವೇಲು ಟಿ.ಎಸ್. ನಾಗಭರಣ ಗುರುರಾಜ್ ಹೊಸಕೋಟೆ == ಉಲ್ಲೇಖಗಳು ==